top of page
yashaswikannadavaa

ಕನ್ನಡ ಪದ್ಯ/ಶಿಶುಗೇತೆ Kannada rhymes/poem


ಆನೆ ಬಂತು ಆನೆ

ಆನೆ ಬಂತು ಆನೆ

ಕಪ್ಪು ಬಣ್ಣದ ಆನೆ

ದೊಡ್ಡ ಹೊಟ್ಟೆಯ ಆನೆ

ಸಣ್ಣ ಕಣ್ಣಿನ ಆನೆ

ಅಗಲ ಕಿವಿಯ ಆನೆ

ಮೋಟು ಬಾಲದ ಆನೆ

ಉದ್ದ ಸೊಂಡಿಲ ಆನೆ


Āne banthu āne

āne banthu āne

kappu baṇṇada āne

doḍḍa hoṭṭeya āne

saṇṇa kaṇṇina āne

agala kiviya āne

mōṭu bālada āne

uddha soṇḍila āne


ಆನೆ ಬಂದಿತ್ತು ಅಣ್ಣ ಆನೆ ಬಂದಿತ್ತು

ಹಬ್ಬದ ದಿನವೇ ಸುಬ್ಬನ ಮನೆಗೆ ಒಂದಾನೆ ಬಂದಿತ್ತು

ಅಪ್ಪನು ಕೊಟ್ಟ ತೆಂಗಿನಕಾಯಿ ಗೊಳಕ್ ನುಂಗಿತ್ತು

ಅಮ್ಮನ ಕೊಟ್ಟ ಬೆಲ್ಲದ ಉಂಡೆ ಗುಳುಂ ಆಗಿತ್ತು


Āne banditthu aṇṇa āne banditthu

habbada dhinavē subbana manege ondāne banditthu

appanu koṭṭa teṅginakāyi goḷak nuṅgitthu

am'mana koṭṭa belladha uṇḍe guḷuṁ āgitthu


ಒಂದಾನೊಂದು ಊರಿತ್ತಂತೆ

ಊರಿಗೊಬ್ಬ ರಾಜನಂತೆ

ರಾಜಗೊಬ್ಬ ಮಂತ್ರಿಯಂತೆ

ಮಂತ್ರಿಗೊಬ್ಬ ಮಗಳಂತೆ


ಮಗಳಿಗೊಂದು ಗೊಂಬೆಯಂತೆ

ಗೊಂಬೆಗೊಂದು ಅಂಗಿಯಂತೆ

ಅಂಗಿಗೊಂದು ಗುಂಡಿಯಂತೆ

ಗುಂಡಿ ಕಿತ್ತು ಹೋಯಿತಂತೆ


Ondhānondu ūritthanthe

ūrigobba rājananthe

rājagobba manthriyanthe

manthrigobba magaḷanthe


magaḷigondu gombeyanthe

gombegondu aṅgiyanthe

aṅgigondu guṇḍiyanthe

guṇḍi kitthu hōyithanthe

114 views0 comments

Recent Posts

See All

Comments


bottom of page