top of page
yashaswikannadavaa

Kannada stories - ಕನ್ನಡ ಕಥೆಗಳು - Kannada Kathegalu



ಡಿಜ್ಜಿ ಡೈನೋ - Dizzy Dino

ಡೈನೋ ವ್ಯಾಲಿಯಲ್ಲಿ, ಡಿಜ್ಜಿ ಎಂಬ ಡೈನೋ ಇತ್ತು. ಡಿಜ್ಜಿಗೆ ನೃತ್ಯ ಮಾಡಲು ಇಷ್ಟ. ಒಂದು ದಿನ, ಡಿಜ್ಜಿಯ ಸ್ನೇಹಿತರು ಒಂದು ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಿದರು. ಟಿ-ರೆಕ್ಸ್ ಕೂಡ ಬಂದಿತು. ಅವರು ಮರದ ಕೆಳಗೆ ಒಟ್ಟಿಗೆ ನೃತ್ಯ ಮಾಡಿದರು. ನೃತ್ಯ ಮುಗಿದ ನಂತರ ಎಲ್ಲರೂ ಮರದ ಕೆಳಗೆ ಕುಳಿತರು. ಅವರಿಗೆ ಊಟ ಮಾಡಿ ಮರದ ಕೆಳಗೆ ಮಲಗಿದರು.


In Dino Valley, there was a dino named Dizzy. Dizzy loves to dance. One day, Dizzy’s friends had a big surprise dance party. T-Rex also joined the party! They danced together under the trees. After the dance, they all sat down under the tree. They had food and slept under the tree.


ಹಾವು ಮತ್ತು ಮರ

ಒಂದು ದೊಡ್ಡ ಕಾಡು ಇದೆ. ಆ ಕಾಡಿನಲ್ಲಿ ಒಂದು ಹಾವು ಇದೆ. ಅದರ ಹೆಸರು ಲುಲು. ಲುಲು   ಒಂದು ವಿಶೇಷ ಮರವನ್ನು ಕಂಡಿತು. ಆ ಮರದಲ್ಲಿ ಹೊಳೆಯುವ ಎಲೆಗಳು ಇತ್ತು. ಮರವು ಮಾತನಾಡಬಲ್ಲದು! "ಹಲೋ, ಲುಲು ಹೇಳಿತು ಮರ. ಈ ಕಾಡಿನ ಅನೇಕ ಕಥೆಗಳು ನನಗೆ ತಿಳಿದಿವೆ" ಎಂದು ಮರವು ಹೇಳಿತು. ಓ ಹೌದಾ, ಹೌದಾ ! ಲುಲು ಹೇಳಿತು. ಲುಲು ತುಂಬಾ ಉತ್ಸುಕವಾಯಿತು. ಮರವು ಋತುಗಳ ಬಗ್ಗೆ, ಪ್ರಾಣಿಗಳ ಬಗ್ಗೆ, ಅರಣ್ಯ ಜೀವನದ ಬಗ್ಗೆ ಅನೇಕ ಕಥೆಗಳನ್ನು ಹೇಳಿತು. ಲುಲು ಎಲ್ಲಾ ಕಥೆಗಳನ್ನು ಕೇಳಿತು. ಅವರು ಸ್ನೇಹಿತರಾದರು. ಹಾವು ಮತ್ತು ಬುದ್ಧಿವಂತ ಮರವು ಒಟ್ಟಾಗಿ ಕಾಡಿನ ಕಥೆಗಳ ರಕ್ಷಕರಾದರು.


There is a big forest. In that forest there is a snake. It’s name is Lulu. Lulu found a special tree. That That tree had shining leaves. The tree could talk! "Hello, Lulu said tree. I know many stories of this forest," said the tree. Is it ! said Lulu. Lulu got very excited. The tree told many stories about seasons, about animals, about forest life. Lulu listened to all the stories. They became friends. Together, the snake and the wise tree became guardians of the forest's stories.


ಅಜ್ಜಿ, ಇರುವೆ ಮತ್ತು ಮ್ಯಾಜಿಕ್ ಮರ

ಒಂದು ದಿನ, ಅಜ್ಜಿ ಮತ್ತು ಇರುವೆ ತೋಟದಲ್ಲಿ ಮ್ಯಾಜಿಕ್ ಕುಕೀ ಮರವನ್ನು ಕಂಡುಹಿಡಿದರು. ಮರವು ವಿವಿಧ ಕುಕೀಗಳನ್ನು ಹೊಂದಿತ್ತು. ಪ್ರತಿದಿನ, ಇರುವೆ ಮತ್ತು ಅಜ್ಜಿ ವಿಭಿನ್ನ ಕುಕೀಗಳನ್ನು ತಿನ್ನುತ್ತಿದ್ದರು ಮತ್ತು ಅವು ತುಂಬಾ ರುಚಿಕರವಾಗಿದ್ದವು. ಅಜ್ಜಿ ತನ್ನ ಸ್ನೇಹಿತರನ್ನು ಆಹ್ವಾನಿಸಿದರು ಮತ್ತು ಇರುವೆಯೂ  ಅದರ ಸ್ನೇಹಿತರನ್ನು ಆಹ್ವಾನಿಸಿತು. ಎಲ್ಲರೂ ಕುಕೀಗಳನ್ನು ತಿಂದರು ಮತ್ತು ಆನಂದಿಸಿದರು. ಆ ದಿನದಿಂದ, ಅಜ್ಜಿ, ಇರುವೆ ಮತ್ತು ಅವರ ಸ್ನೇಹಿತರು ಮಾಯಾ ಮರದ ಕೆಳಗೆ ಕುಕೀ ಪಿಕ್ನಿಕ್ ಮಾಡಿದರು.


One day, Grandma and Ant discovered a magical cookie tree in the garden. The tree had a variety of cookies. Every day, Ant and Grandma used to eat different cookies, and they were very delicious. Grandma invited her friends, and Ant invited its friends. Everyone enjoyed the cookies and had fun. From that day on, Grandma, Ant, and their friends had cookie picnics under the magic tree.



ಒಂಟಿ ಕಾಗೆ

ಒಂದು ತೋಟವಿತ್ತು. ಆ ತೋಟದಲ್ಲಿ ಒಂಟಿ ಕಾಗೆ ಇತ್ತು. ಅದರ ಹೆಸರು ರಾಮು. ರಾಮುಗೆ ಗೆಳೆಯರೇ ಇರಲಿಲ್ಲ. ಅವನು ಅದರ ಬಗ್ಗೆ ಬೇಸರವಾಗಿದ್ದನು. ಒಂದು ದಿನ, ಪಕ್ಷಿಗಳ ಗುಂಪು ಆ ತೋಟಕ್ಕೆ ಬಂದಿತು. ಮೊದಲಿಗೆ ರಾಮುವಿಗೆ ನಾಚಿಕೆಯಾಯಿತು. ನಂತರ ರಾಮು ಅವರಿಗೆ ತಮಾಷೆಯ ಕಥೆಗಳನ್ನು ಹೇಳತೊಡಗಿದ. ಪಕ್ಷಿಗಳು ನಗುತ್ತಾ ಕಥೆಗಳನ್ನು ಕೇಳಿದವು. ಎಲ್ಲರೂ ಒಟ್ಟಿಗೆ ಮೋಜು-ಮಸ್ತಿ ಮಾಡಿದರು. ಆ ದಿನದಿಂದ ರಾಮು ತನ್ನ ಹೊಸ ಗೆಳೆಯರ ಜೊತೆ ತುಂಬಾ ಖುಷಿಯಾಗಿದ್ದ.


There was a garden. There was a lone crow in that garden. Its name is Ramu. Ramu had no friends. He was sad about it. One day, a flock of birds came to that garden. At first Ramu felt shy. Then Ramu started telling them funny stories. The birds laughed and listened to the stories. Everyone had fun together. From that day Ramu was very happy with his new friends.



ಹದ್ದು

ಒಂದು ದೊಡ್ಡ ಕಾಡಿನಲ್ಲಿ ಆಕಾಶವನ್ನು ಮುಟ್ಟುವ ದೈತ್ಯ ಮರವಿತ್ತು. ಆ ಮರದ ಒಂದು ಕೊಂಬೆಯಲ್ಲಿ, ಒಂದು ಬುದ್ಧಿವಂತ ಹದ್ದು ಗೂಡನ್ನು ಮಾಡಿತು. ಪ್ರತಿದಿನ ಹದ್ದು ಎತ್ತರದಲ್ಲಿ ಕುಳಿತು ಕೆಳಗೆ ಆಡುತ್ತಿರುವ ಎಲ್ಲಾ ಪ್ರಾಣಿಗಳನ್ನು ನೋಡುತ್ತಿತ್ತು. ಆ ಬೃಹತ್ ಮರ ಮತ್ತು ಹದ್ದು ಉತ್ತಮ ಸ್ನೇಹಿತರಾದರು.


In a big forest there was a giant tree that touched the sky. In one of the branches of that tree, a wise eagle made a nest. Every day the eagle sat high and watched all the animals playing below. That huge tree and the eagle became good friends.



ದಯಾಳು ಮರ


ಒಂದು ದಿನ ಒಬ್ಬ ಬೇಟೆಗಾರ ತನ್ನ ಸ್ನೇಹಿತರೊಂದಿಗೆ ಕಾಡಿಗೆ ಬಂದನು. ಕಾಡಿನಲ್ಲಿ ಒಂದು ದಯಾಳು ಮರವಿತ್ತು, ಈ ಬೇಟೆಗಾರರು ಬಲೆಯೊಂದಿಗೆ ಸಮೀಪಿಸುತ್ತಿರುವುದನ್ನು ಗಮನಿಸಿತು. ಬುದ್ಧಿವಂತ ಮರವು ಪ್ರಾಣಿಗಳಿಗೆ ಪಿಸುಗುಟ್ಟಿತು, ಎಲ್ಲರಿಗೂ ಬಚ್ಚಿಟ್ಟುಕೊಳ್ಳುವಂತೆ ಎಚ್ಚರಿಸಿತು. ಬೇಟೆಗಾರನಿಗೆ ಯಾವುದೇ ಪ್ರಾಣಿಗಳು ಸಿಗದಿದ್ದಾಗ ಅವನು ಹೊರಟುಹೋದನು. ಪ್ರಾಣಿಗಳು ಮರಕ್ಕೆ ಧನ್ಯವಾದ ಹೇಳಿದವು.


One day a hunter came to the forest with his friends. There was a kind tree in the forest that noticed these hunters approaching with a net. The wise tree whispered to the animals, warned them all to hide. When the hunter found no animals, he left. The animals thanked the tree.



ಮೊಬೈಲ್ ಮತ್ತು ಮಗು


ಮೊಬೈಲ್: "ಹೇ ಮಗು, ಕೆಲವೊಮ್ಮೆ ನೀನು ನನ್ನನ್ನು ಸ್ವಲ್ಪ ಕಡಿಮೆ ಬಳಸುಬೇಕು.


ಮಗು: "ಆದರೆ ನನಗೆ  ಮೊಬೈಲ್  ನಲ್ಲಿ ಆಟ ಆಡಲು ಮತ್ತು ವೀಡಿಯೋ ನೋಡಲು ತುಂಬಾ  ಇಷ್ಟ!"


ಮೊಬೈಲ್: "ಅದು ಸರಿ! ಆದರೆ ನೀನು ಯಾವಾಗಲೂ ಮೊಬೈಲ್ ನಲ್ಲಿಯೇ ಇರುತ್ತೀಯಾ. ನೀನು ಹೊರಗೆ ಹೋಗಿ ಆಟ ಆಡುವುದನ್ನೇ ಮರೆತ್ತಿದ್ದೀಯ.


ಮಗು: ಅದು ತಪ್ಪಾ ?


ಮೊಬೈಲ್: ಹೌದು ಮಗು ! ಹೊರಗೆ ಆಟವಾಡುವುದರಿಂದ ನಿನ್ನ ದೇಹಕ್ಕೆ ಹಾಗೂ ಮನಸ್ಸಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಅದು ಆರೋಗ್ಯಕರವೂ ಹೌದು! ಮೋಜು ಸಹ !



Mobile: “Hey baby, sometimes you need to use me a little less.


Kid: "But I love playing games and watching videos on my mobile!"


Mobile: "That's right! But are you always on your mobile. You forgot to go out and play games.


Child: Is that wrong?


Mobile: Yes baby! Playing outside is good exercise for your body and mind. It's healthy too! Fun too!




ಗಣೇಶ್ ಮತ್ತು ಕುಮಾರಿ


ಗಣೇಶ್ ಮತ್ತು ಕುಮಾರಿ ಮರದ ಕೆಳಗೆ ಕುಳಿತಿದ್ದರು.

ಕುಮಾರಿ: ಗಣೇಶ್ ನೀನು ದಿನಾಲೂ ವ್ಯಾಯಾಮ ಮಾಡುತ್ತೀಯಾ ?

ಗಣೇಶ್: ಹೌದು. ನನಗೆ  ವ್ಯಾಯಾಮ ಮಾಡುವುದು ತುಂಬಾ ಇಷ್ಟ.

ಕುಮಾರಿ: ನನಗೂ ವ್ಯಾಯಾಮ ಮಾಡ್ಬೇಕು. ಆದರೆ ಹೇಗೆ ಮಾಡಬೇಕೆಂದು ನನಗೆ ತಿಳಿದಿಲ್ಲ.

ಗಣೇಶ್: ನನ್ನ ಮನೆಗೆ ಬಾ, ನಾನು ನಿನಗೆ ಕಲಿಸುತ್ತೇನೆ.

ಕುಮಾರಿ: ವಾಹ್ ಅದ್ಭುತ! ನಾನು ನಾಳೆಯಿಂದ ಬರಲೇ?

ಗಣೇಶ್: ಸರಿ. ನಾಳೆ ಭೇಟಿಯಾಗೋಣ.


Ganesh and Kumari were sitting under a tree.

Kumari: Ganesh, do you exercise every day?

Ganesh: Yes. I love to exercise.

Kumari: I have to exercise too. But I don't know how to do it.

Ganesh: Come to my house, I will teach you.

Kumari: Wow amazing! Shall I come from tomorrow?

Ganesh: Right. See you tomorrow.




ಮರಿ ಆನೆ


ಮರಿ ಆನೆ: ಅಮ್ಮಾ, ನಾವು ಯಾವಾಗಲೂ ನೀರನ್ನು ಯಾಕೆ ಕಡಿಮೆ ಬಳಸಬೇಕು ?

ಅಮ್ಮ ಆನೆ: ಮಗು, ನೀರು ಅಮೂಲ್ಯವಾದುದು, ನಾವು ಹೆಚ್ಚು ಬಳಸಿದರೆ, ಬೇರೆ  ಪ್ರಾಣಿಗಳಿಗೆ ಮತ್ತು ಸಸ್ಯಗಳಿಗೆ ಸಾಕಾಗುವುದಿಲ್ಲ.

ಮರಿ ಆನೆ: ಆದರೆ ನದಿಯಲ್ಲಿ ತುಂಬಾ ನೀರಿದೆಯಲ್ಲಾ ಅಮ್ಮಾ !

ಅಮ್ಮ ಆನೆ: ನಿಜ, ಮಿತಿ ಮೀರಿ ಬಳಸಿದರೆ, ಅದು ತಪ್ಪಲ್ಲವೇ ? ನಮಗೆ ಬೇಕಾದಷ್ಟು, ಬೇಕಾದಾಗ ಮಾತ್ರ ಬಳಸಬೇಕು. ಅನವಶ್ಯಕವಾಗಿ ನೀರು ಪೋಲು ಮಾಡಬಾರದು. ನೀರು ಅತ್ಯಮೂಲ್ಯವಾದುದು.

ಅಮ್ಮ ಆನೆ : ಸರಿ, ಅಮ್ಮ! ನಾನು ನೀರು ಉಳಿಸುವ ಸೂಪರ್‌ಹೀರೋ ಆಗುತ್ತೇನೆ! ನನ್ನ ಗೆಳೆಯರಿಗೂ ಇದನ್ನು ಹೇಳುತ್ತೇನೆ.




Baby elephant: Mom, why do we always have to use less water?

Mother Elephant: Baby, water is precious, if we use too much, there will not be enough for other animals and plants.

Baby elephant: But there is a lot of water in the river, mother!

Mother Elephant: True, if it is used beyond the limit, is it not wrong? We should only use as much as we need, when we need it. Do not waste water unnecessarily. Water is precious.

Mother Elephant: Okay, Mother! I'll be a water-saving superhero! I tell this to my friends too.

427 views0 comments

Recent Posts

See All

Madhurāshtakam lyrics - English

NOTE: ▪️Stress the letters that are in bold. Ex: bha je ▪️Extend the letters that have a line on the letter. Example: rāja ▪️Letter ‘na’...

Ahobila nārasimha stōtram

NOTE: ▪️Stress the letters that are in bold. Ex: bha je ▪️Extend the letters that have a line on the letter. Example: rāja ▪️Letter ‘na’...

Siddhakunjika stōtram

NOTE: ▪️Stress the letters that are in bold. Ex: bha je ▪️Extend the letters that have a line on the letter. Example: rāja ▪️Letter ‘na’...

Comments


bottom of page